Written By : Gopal Krushan Adiga
ಬರೆದವರು : ಗೋಪಾಲ ಕೃಷ್ಣ ಅಡಿಗ
ಮೌನ ತಬ್ಬಿತು ನೆಲವ ಜುಮ್ಮನೆ
ಪುಳಕ ಗೊಂಡಿತು ಧಾರಿಣಿ
ಹಕ್ಕಿ ಗೊರಲಿನ ಸುರಥ ಗಾನಕೆ
ಬಿದಿರು ನಸುವೆ ಸಡಿಲಿತು
ಬೆಚ್ಚನೆ ಉಸಿರಿನಂದದಿ
ಗಾಳಿ ಮೆಲ್ಲನೆ ತೆವಳಿತು
ಮೌನ ತಬ್ಬಿತು ನೆಲವ ಜುಮ್ಮನೆ
ಪುಳಕ ಗೊಂಡಿತು ಧಾರಿಣಿ
ಇರುಳ ಸೆರಗಿನ ನೆಳಲು ಚಾಚಿತು
ಬಾನು ಸೇರಿತು ತನ್ನನು
ನೆಲವು ತಣಿಸಿತು ಬೆವರು ಹರಿಸಿತು
ಬಾಷ್ಪ ನೆನಿಸಿತು ಹುಲ್ಲನು
ಮೌನ ತಬ್ಬಿತು ನೆಲವ ಜುಮ್ಮನೆ
ಪುಳಕ ಗೊಂಡಿತು ಧಾರಿಣಿ
ಮೌನ ಉರುಳಿತು ಹೊರಳಿತೆದ್ದಿತು
ಗಾಳಿ ಭೋರನೆ ಬಿಸಿತು
ತೆಂಗು ಗರಿಗಳ ಚಾಮರಕೆ
ಹಾಯೆಂದು ಮೌನವು ಮಲಗಿತು
------------------------------------------------------------------------------------------------------------
Mouna Thabbithu Nelava Jummane
Pulaka Gondithu Dharini
Nodi Nachithu Baanu Serithu
Kempu Sanjeya Kadapali
Mouna Thabbithu Nelava Jummane
Pulaka Gondithu Dharini
Hakki Goralina Suratha Gaanake
Bidiru Nasuve Sadilithu
Bechchcane Usirinandadi
Gaali Mellane Thevalithu
Mouna Thabbithu Nelava Jummane
Pulaka Gondithu Dharini
Irula Seragina Nelalu Chachithu
Baanu Thereyithu Kannannu
Nelavu Thaniyithu Bevaru Haniyithu
Bashpa Nenesithu Hullanu
Mouna Thabbithu Nelava Jummane
Pulaka Gondithu Dharini
Mouna Urulithu Horalitheddithu
Gaali Bhorane Beesithu
Thengu Garigala Chamarake
Haayendu Mounavu Malagithu
No comments:
Post a Comment