Pages

Monday, 21 November 2016

ಕುಶಲವೇ ಕ್ಷೇಮವೇ ಸೌಖ್ಯವೇ - ಯಾರೆ ನೀನು ಚೆಲುವೆ

ಚಿತ್ರ : ಯಾರೆ ನೀನು ಚೆಲುವೆ
ರಚನೆ : ಹಂಸಲೇಖ
ಕಲಾವಿದರು : ವಿ. ರವಿಚಂದ್ರನ್


ಕುಶಲವೇ ಕ್ಷೇಮವೇ ಸೌಖ್ಯವೇ
ಕುಶಲವೇ ...ಕ್ಷೇಮವೇ ...ಸೌಖ್ಯವೇ
ಓ ನನ್ನ ಪ್ರೀತಿ ಪಾತ್ರಳೇ ...
ಓದಮ್ಮ ನನ್ನ ಓಲೆ...ಹೃದಯ ಭಾವಲೀಲೆ...
ಕಲ್ಪನೆಯೇ ಹೆಣ್ಣಾಗಿದೇ...ಕನಸುಗಳೇ ಹಾಡಾಗಿದೆ
ಯಾರೇ ನೀನು ಚೆಲುವೆ ಎಂದಿದೆ....
ಕುಶಲವೇ...ಕ್ಷೇಮವೇ...ಸೌಖ್ಯವೇ
ಒಂದೇ ಉಸಿರಿನಲೀ ...ಪ್ರಥಮ ಪತ್ರ ಓದಿದೆ...
ಆ ನಿನ್ನ ಉಸಿರಿನಲೇ ...ಈ ಜೀವ ಜೀವಿಸಿದೆ
ಮುದ್ದಾದ ...ಬರಹ ...ಮರೆಸಿದೆ ...ವಿರಹ
ಅಕ್ಷರಕ್ಕೆ ಯಾರು ...ಈ ಮಾಯಾಶಕ್ತಿ ತಂದರೋ
ಒಂದೊಂದು ...ಪತ್ರವು ...ಪ್ರೇಮದ ...ಗ್ರಂಥವು
ಓಲೆಗಳಿಗ್ಯಾರು ಈ ರಾಯಭಾರ ತಂದರು
ಓಲೆಗಳೇ ಬಾಳಾಗಿದೆ ...ಓದುವುದೇ ಗೀಳಾಗಿದೇ...
ಯಾರೇ ನೀನು ಚೆಲುವೆ ಅಂದಿದೆ......
ಕುಶಲವೇ...ಕ್ಷೇಮವೇ...ಸೌಖ್ಯವೇ
ಈ ಮಾತೆ ಮಧುರವಾಗಿದೆ
ತೆರೆದ ಹೃದಯವದು...ಪ್ರೇಮ ರೂಪವದು
ನೂರಾರು ಪ್ರೇಮದಾಸರು...ಪ್ರೀತಿಸಿ ದೂರವಾದರು
ನಾವಿಂದು ದೂರ ಇದ್ದರೂ ವಿರಹಗಳೇ ನಮ್ಮ ಮಿತ್ರರು
ನೋಡದೇ ...ಇದ್ದರೂ ...ಪ್ರೀತಿಸೋ ...ಇಬ್ಬರೂ
ನೋಡೋರ ಕಣ್ಣಲ್ಲಿ ಏನೇನೋ ಹಾಡೋ ಹುಚ್ಚರು
ದೂರಾನೆ ...ಆರಂಭ ...ಸೇರೋದೆ ...ಅಂತಿಮ ...
ಅಲ್ಲಿವರೆಗೂ ಯಾರೂ ಈ ಹುಚ್ಚು ಪ್ರೀತಿ ಮೆಚ್ಚರು..
ದೂರದಲೇ ಹಾಯಾಗಿದೇ ...ಕಾಯುವುದೇ ಸುಖವಾಗಿದೇ
ಓ ....ಯಾರೋ ನೀನು ಚೆಲುವ ಅಂದಿದೆ....

No comments:

Post a Comment