Pages

Monday, 28 August 2017

ಮುಗುಳುನಗೆ ಏನೇ ಹೇಳು - Mugulu nage ene helu - MUGULU NAGE



ಮುಗುಳುನಗೆ ಏನೇ ಹೇಳು ಮುಗುಳುನಗೆ ಏನೇ ಹೇಳು
ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ
ತುಸು ಬಿಡಿಸಿ ಹೇಳು ನನಗೆ
ನನ  ತುಟಿಯೆ ಬೇಕೇ ನಿನಗೆ
ನನ್ನೆಲ್ಲ ನೋವಿಗೂ ನಗುವೇ
ನೀ ಏಕೇ ಹೀಗೇ

ಮುಗುಳುನಗೆ ಏನೇ ಹೇಳು ಮುಗುಳುನಗೆ ಏನೇ ಹೇಳು
ಯಾರಿದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ

ಸಾಕಾಗದ ಏಕಾಂತವ ನಿನ್ನಿಂದ ನಾ ಕಲಿತೆ
ಯಾಕಾಗಿ ನೀ ಮರೆ ಮಾಚುವೆ ನನ್ನೆಲ್ಲ  ಭಾವುಕತೆ
ಸೋತಂತಿದೆ ಸಂಭಾಷಣೆ ಗೆಲ್ಲುವುದು ನಿನಗೆ ಹೊಸತೆ
ಅಳುವೊಂದು ಬೇಕು ನನಗೆ
ಅರೆ ಗಳಿಗೆ ಹೋಗು ಹೊರಗೆ
ಇಷ್ಟೋಲ್ಲೇ ಸ್ನೇಹಿತನಾಗಿ ಕಾಡಿದರೆ ಹೇಗೇ

ಮುಗುಳುನಗೆ ಏನೇ ಹೇಳು ಮುಗುಳುನಗೆ ಏನೇ ಹೇಳು
ಯಾರಿದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ

ಕಣ್ಣಾಲಿಯ ಜಲಪಾತ ವ ಬಂಧಿಸಲು ನೀ ಯಾರು
ನೀ ಮಾಡುವ ನಗೆ ಪಾಟಲು ಖಂಡಿಸಲು ನಾ ಯಾರು
ಸಂತೋಷಕು ಸಂತಾಪಕು ಇರಲಿಬಿಡು ಒಂದೇ ಬೇರು
ಕಂಗಳಲಿ ಬಂದಾ ಮಳೆಗೆ ಕೊಡೆ ಹಿಡಿವ ಆಸೆಯೇ ನಿನಗೆ
ಅತ್ತು ಬಿಡು ನನ್ನಾ ಜೊತೆಗೆ ನಗಬೇಡ ಹೀಗೇ

ಮುಗುಳುನಗೆ ಏನೇ ಹೇಳು ಮುಗುಳುನಗೆ ಏನೇ ಹೇಳು
ಯಾರಿದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ

Muguḷunage ēnē hēḷu muguḷunage ēnē hēḷu

yārirada vēḷeyalli nī ēke jotegiruve

tusu biḍisi hēḷu nanage

nana tuṭiye bēkē ninage

nannella nōvigū naguvē

nī ēkē hīgē


muguḷunage ēnē hēḷu muguḷunage ēnē hēḷu

yārida vēḷeyalli nī ēke jotegiruve


sākāgada ēkāntava ninninda nā kalite

yākāgi nī mare mācuve nannella bhāvukate

sōtantide sambhāṣaṇe gelluvudu ninage hosate

aḷuvondu bēku nanage

are gaḷige hōgu horage

iṣṭōllē snēhitanāgi kāḍidare hēgē


muguḷunage ēnē hēḷu muguḷunage ēnē hēḷu

yārida vēḷeyalli nī ēke jotegiruve


kaṇṇāliya jalapāta va bandhisalu nī yāru

nī māḍuva nage pāṭalu khaṇḍisalu nā yāru

santōṣaku santāpaku iralibiḍu ondē bēru

kaṅgaḷali bandā maḷege koḍe hiḍiva āseyē ninage

attu biḍu nannā jotege nagabēḍa hīgē


muguḷunage ēnē hēḷu muguḷunage ēnē hēḷu

yārida vēḷeyalli nī ēke jotegiruve

ಏನೋ ಇದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ - ENO IDE ENO IDE EE PREETHILI ENO IDE

ಏನೋ ಇದೆ ಏನೋ ಇದೆ ಈ ಪ್ರೀತಿಲಿ ಏನೋ ಇದೆ
ಏನಿದೆ ಏನೇನ್ ಇದೆ ಈ ಪ್ರೀತಿಲಿ ಇನ್ನೇನ್ ಇದೆ

ಬಾಳಿನ ದೀಪವೇ ಇಂದು ಆರಿ ಹೋಗಿದೆ
ನನ್ನಯ ನೇರಳೆ ನನ್ನ ಬಿಟ್ಟು ಹೋಗಿದೆ
ಜೀವನ ಅಲ್ಲೋಲ ಕಲ್ಲೋಲ ವಾಗಿದೆ
ಕರೆಯುವ ಕೊರಲೆ ಮೌನ ತಾಳಿದೆ

ತನ್ನ ರಾಗವನ್ನೇ ಹಾಡು ತೊರೆದಂತೆ
ಭಾವದಲ್ಲಿ ಬರೆದ ಚಿತ್ರ ಹರಿದಂತೆ
ಕನ್ನ  ಹಾಕಿ ಹೃದವನ್ನೇ ಕೊರೆದಂತೆ
ನನ್ನ ಶೋಕ ಗೀತೆ ನಾನೇ ಬರೆದಂತೆ
 ಪರಿತಾಪವೇ ಪ್ರೀತಿಯ ಫಲವೇ
ಸರಿ ಉತ್ತರ ನೀಡು ನೀ ಒಲವೇ
ಬೆಳದಿಂಗಳೇ ಮರೆಯಾಗಿದೆ

ಆಕಾಶವೇ ಸುಳ್ಳಾಗಿದೆ
ಈ ಭೂಮಿಯು ಮುಳ್ಳಾಗಿದೆ

ಕಾಣುವಂಥ ನೂರು ನೋವು ಇರುಳಲ್ಲಿ
ನಾಟಿದಂತೆ ಬಾಣಬಂದು  ಎದೆಯಲ್ಲಿ
ನೀನೇ ಬೇಕು ಎಂಬ ಛಲದಲ್ಲಿ
ಲೂಟಿ ಹಾಗೆ ಹೋದೆನಲ್ಲ ಒಲವಲ್ಲಿ
ಇದು ಎಚ್ಚರವಿಲ್ಲದ ಕನಸೇ
ಅಥವಾ ಇದು ಸಾವಿನ ತಿನಿಸೇ
ನಿಜಬಣ್ಣವೇ ಬಯಲಾಗಿದೆ

ಆಕಾಶವೇ ಸುಳ್ಳಾಗಿದೆ
ಈ ಭೂಮಿಯು ಮುಳ್ಳಾಗಿದೆ





 



Saturday, 26 November 2016

ದಿನ ಹೀಗೆ ಜಾರಿ ಹೋಗಿದೆ - ಸುಬ್ರಾಯ ಚೊಕ್ಕಾಡಿ

ಸಾಹಿತ್ಯ :ಸುಬ್ರಾಯ ಚೊಕ್ಕಾಡಿ
ಸಂಗೀತ :ಸಿ.ಅಶ್ವಥ್
ಗಾಯನ:ನರಸಿಂಹ ನಾಯಕ್

ದಿನ ಹೀಗೆ ಜಾರಿ ಹೋಗಿದೆ
ನೀನೀಗ ಬಾರದೆ
ಜೊತೆಯಿರದ ಬಾಳ ಜಾತ್ರೆಯಲಿ
ಸೊಗಸೇನಿದೆ ll

ಅರಳಿ ಅನೇಕ ಹೂಗಳು
ಬರಿದೆ ಕಾದಿವೆ
ಹಿಮದ ಕಠೋರ ಕೈಯಲ್ಲಿ
ನರಳಿ ಕೆಡೆದಿವೆ ll ದಿನ ll

ಜತೆಯ ಕಾಣದೀಗ ಹಕ್ಕಿ
ಅನಾಥವಾಗಿದೆ
ಋತು ಚೈತ್ರ ಜಾರಿ ಹೋಗಿದೆ
ಗ್ರೀಷ್ಮ ಬರುತಿದೆ ll ದಿನ ll

ದುಗುಡ ನಿಧಾನ ಬೆಳೆಯುತ
ಬಾಳ ಮುಸುಕಿದೆ
ಉಳಿದೇನಿತಾಂತ ಕಾಯುತ
ಕನಸು ಮಾಸಿದೆ ll ದಿನ ll

Friday, 25 November 2016

ನೂರೊಂದು ನೆನಪು, ಎದೆಯಾಳದಿಂದ - ಬಂಧನ

ಚಿತ್ರ: ಬಂಧನ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್ ಪಿ ಬಾಲಸುಬ್ರಮಣ್ಯಂ



ನೂರೊಂದು ನೆನಪು, ಎದೆಯಾಳದಿಂದ
ಹಾಡಾಗಿ ಬಂತೂ ಆನಂದದಿಂದ
ಸಿಂಧೂರ ಬಿಂದು, ನಗಲಮ್ಮ ಎಂದೂ
ಎಂದೆಂದು ಇರಲಮ್ಮ ಈ ದಿವ್ಯ ಬಂಧಾ...

ನೂರೊಂದು ನೆನಪು, ಎದೆಯಾಳದಿಂದ
ಹಾಡಾಗಿ ಬಂತೂ ಆನಂದದಿಂದ

ಒಲವೆಂಬ ಲತೆಯು ತಂದಂತ ಹೂವು,
ಮುಡಿಯೇರೆ ನಲಿವು ಮುಡಿ ಜಾರೆ ನೋವು,
ಕೈ ಗೂಡಿದಾಗ ಕಂಡಂಥ ಕನಸು,
ಅದೃಷ್ಟದಾಟ ತಂದಂಥ ಸೊಗಸು.
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ,
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ,
ನೀವೆಂದು ಇರಬೇಕು ಸಂತೋಷದಿಂದಾ..

ನೂರೊಂದು ನೆನಪು, ಎದೆಯಾಳದಿಂದ
ಹಾಡಾಗಿ ಬಂತೂ ಆನಂದದಿಂದ

ತುಟಿ ಮೇಲೆ ಬಂದಂತ ಮಾತೊಂದೇ ಒಂದು
ಎದೆಯಲ್ಲಿ ಉಳಿದದ್ದು ಮುನ್ನೂರ ಒಂದು
ಮೂರು ಗಂಟಲ್ಲಿ ಈ ಬಾಳ ನಂಟು,
ಕೇಳಿ ಪಡೆದಾಗ ಸಂತೋಷ ಉಂಟು.
ನಿನ್ನ ಹರುಷದಲಿ ನನ್ನ ಉಸಿರಿರಲಿ
ನಿನ್ನ ಹರುಷದಲಿ ನನ್ನ ಉಸಿರಿರಲಿ
ನನ್ನೆಲ್ಲ ಹಾರೈಕೆ ಈ ಹಾಡಿನಿಂದಾ...

ನೂರೊಂದು ನೆನಪು, ಎದೆಯಾಳದಿಂದ
ಹಾಡಾಗಿ ಬಂತೂ ಆನಂದದಿಂದ

Monday, 21 November 2016

ಕುಶಲವೇ ಕ್ಷೇಮವೇ ಸೌಖ್ಯವೇ - ಯಾರೆ ನೀನು ಚೆಲುವೆ

ಚಿತ್ರ : ಯಾರೆ ನೀನು ಚೆಲುವೆ
ರಚನೆ : ಹಂಸಲೇಖ
ಕಲಾವಿದರು : ವಿ. ರವಿಚಂದ್ರನ್


ಕುಶಲವೇ ಕ್ಷೇಮವೇ ಸೌಖ್ಯವೇ
ಕುಶಲವೇ ...ಕ್ಷೇಮವೇ ...ಸೌಖ್ಯವೇ
ಓ ನನ್ನ ಪ್ರೀತಿ ಪಾತ್ರಳೇ ...
ಓದಮ್ಮ ನನ್ನ ಓಲೆ...ಹೃದಯ ಭಾವಲೀಲೆ...
ಕಲ್ಪನೆಯೇ ಹೆಣ್ಣಾಗಿದೇ...ಕನಸುಗಳೇ ಹಾಡಾಗಿದೆ
ಯಾರೇ ನೀನು ಚೆಲುವೆ ಎಂದಿದೆ....
ಕುಶಲವೇ...ಕ್ಷೇಮವೇ...ಸೌಖ್ಯವೇ
ಒಂದೇ ಉಸಿರಿನಲೀ ...ಪ್ರಥಮ ಪತ್ರ ಓದಿದೆ...
ಆ ನಿನ್ನ ಉಸಿರಿನಲೇ ...ಈ ಜೀವ ಜೀವಿಸಿದೆ
ಮುದ್ದಾದ ...ಬರಹ ...ಮರೆಸಿದೆ ...ವಿರಹ
ಅಕ್ಷರಕ್ಕೆ ಯಾರು ...ಈ ಮಾಯಾಶಕ್ತಿ ತಂದರೋ
ಒಂದೊಂದು ...ಪತ್ರವು ...ಪ್ರೇಮದ ...ಗ್ರಂಥವು
ಓಲೆಗಳಿಗ್ಯಾರು ಈ ರಾಯಭಾರ ತಂದರು
ಓಲೆಗಳೇ ಬಾಳಾಗಿದೆ ...ಓದುವುದೇ ಗೀಳಾಗಿದೇ...
ಯಾರೇ ನೀನು ಚೆಲುವೆ ಅಂದಿದೆ......
ಕುಶಲವೇ...ಕ್ಷೇಮವೇ...ಸೌಖ್ಯವೇ
ಈ ಮಾತೆ ಮಧುರವಾಗಿದೆ
ತೆರೆದ ಹೃದಯವದು...ಪ್ರೇಮ ರೂಪವದು
ನೂರಾರು ಪ್ರೇಮದಾಸರು...ಪ್ರೀತಿಸಿ ದೂರವಾದರು
ನಾವಿಂದು ದೂರ ಇದ್ದರೂ ವಿರಹಗಳೇ ನಮ್ಮ ಮಿತ್ರರು
ನೋಡದೇ ...ಇದ್ದರೂ ...ಪ್ರೀತಿಸೋ ...ಇಬ್ಬರೂ
ನೋಡೋರ ಕಣ್ಣಲ್ಲಿ ಏನೇನೋ ಹಾಡೋ ಹುಚ್ಚರು
ದೂರಾನೆ ...ಆರಂಭ ...ಸೇರೋದೆ ...ಅಂತಿಮ ...
ಅಲ್ಲಿವರೆಗೂ ಯಾರೂ ಈ ಹುಚ್ಚು ಪ್ರೀತಿ ಮೆಚ್ಚರು..
ದೂರದಲೇ ಹಾಯಾಗಿದೇ ...ಕಾಯುವುದೇ ಸುಖವಾಗಿದೇ
ಓ ....ಯಾರೋ ನೀನು ಚೆಲುವ ಅಂದಿದೆ....